Our Books
SEE Allabout this book
2017, ದೆಹಲಿ – ಮರಣ ಶಯ್ಯೆಯಲ್ಲಿರುವ ವಿದ್ಯುತ್ನ ಪೂರ್ವಜರೊಬ್ಬರು ಆತನನ್ನು ಬನಾರಸ್ಗೆ ಕರೆಸುತ್ತಾರೆ. ದೇವ-ರಾಕ್ಷಸ ಪಂಥದ ಮಠದಲ್ಲಿರುವ ವಯೋವೃದ್ಧ ಬ್ರಾಹ್ಮಣ ಮುಖಂಡ ತನ್ನೊಳಗೆ ಒಂದು ರಹಸ್ಯವನ್ನು ಇರಿಸಿಕೊಂಡಿದ್ದಾರೆ. ಅವರ ಇಡೀ ವಂಶವೇ ಒಂದು ಪ್ರಾಚೀನ ಶಾಪಕ್ಕೆ ಗುರಿಯಾಗಿದೆ, ಆ ಶಾಪವು ಇಡೀ ಮಾನವಕುಲವನ್ನೇ ಕ್ರೂರ ವಿನಾಶದ ಕಡೆಗೆ ಕೊಂಡೊಯ್ಯುತ್ತದೆ.
ಕ್ರಿ.ಪೂ 1700, ಹರಪ್ಪ – ಹರಪ್ಪ ನಗರವು ಸರಸ್ವತಿ ನದಿಯ ದಂಡೆಯಲ್ಲಿರುವ ಒಂದು ಮನಮೋಹಕ ನಗರ. ವಿಶ್ವಾಸಘಾತುಕತನ, ತಾಂತ್ರಿಕ ಭೂತೋಚ್ಚಾಟನೆ ಮತ್ತು ರಕ್ತಪಾತದ ಅಂಧಕಾರವು ಕೊನೆಯ ದೇವತೆಯ ಮೇಲೆ ತನ್ನ ಕರಾಳ ಹಸ್ತವನ್ನು ಚಾಚುತ್ತದೆ, ಇದು ಆತ ತನ್ನ ವಿನಾಶಕಾರಿಯಾದ ಸೇಡು ತೀರಿಸಿಕೊಳ್ಳಲು… ಮತ್ತು ಅದ್ಭುತ ನಾಗರಿಕತೆಯ ಪತನದ ಹಿಂದಿನ ಭಯಾನಕ ಸತ್ಯ ಹೊರಬರಲು ದಾರಿ ಮಾಡಿಕೊಡುತ್ತದೆ.
2017, ಪ್ಯಾರಿಸ್ – ವಿಶ್ವದ ಅತ್ಯಂತ ಶಕ್ತಿಶಾಲಿ ಧಾರ್ಮಿಕ ಸಂಸ್ಥೆಯಲ್ಲಿ ಕೋಲಾಹಲ ಉಂಟಾಗಿದೆ. ಯುರೋಪಿನ ಅಪರಾಧ ಜಗತ್ತಿನ ಅನಭಿಷಿಕ್ತ ದೊರೆ ಪ್ಯಾರಿಸ್ನಲ್ಲಿ ಒಬ್ಬ ವ್ಯಕ್ತಿಯನ್ನು ಭೇಟಿಯಾಗುತ್ತಾನೆ. ಕುಖ್ಯಾತ ಹಂತಕನೊಬ್ಬನು ರೈಲು ಹತ್ತುತ್ತಾನೆ, ರೋಮ್ ಕೆಟ್ಟದ್ದೇನೋ ಸಂಭವಿಸುತ್ತದೆ ಎಂದು ಕಂಪಿಸುತ್ತದೆ. ಭವಿಷ್ಯ ನುಡಿದ ದೇವತೆ ಮರಳಿ ಬಂದಿದ್ದಾನೆ.
ಬನಾರಸ್, ಹರಪ್ಪ ಮತ್ತು ರೋಮ್ ಅನ್ನು ಯಾವ ಕೊಂಡಿಯು ಸಂಪರ್ಕಿಸುತ್ತದೆ? ಆ ಪ್ರಾಚೀನ ಶಾಪ ಯಾವುದು ಮತ್ತು ಆ ಕೊನೆಯ ದೇವತೆ ಯಾರು? ಬೃಹತ್ತಾದ ಸಿಂಧೂ ಕಣಿವೆಯ ಪತನದ ಹಿಂದಿರುವ ಆ ಭಯಾನಕ ರಹಸ್ಯವೇನು? ಮೋಸ ಮತ್ತು ಹಿಂಸೆ, ದೇವರುಗಳು ಮತ್ತು ರಾಕ್ಷಸರು, ಪ್ರೀತಿ ಮತ್ತು ಮಹತ್ವಾಕಾಂಕ್ಷೆಗಳ ಎಳೆಗಳ ಮೂಲಕ ನಿಮ್ಮನ್ನು ಕ್ಷಣ ಕ್ಷಣಕ್ಕೂ ರೋಮಾಂಚಕವಾಗಿ ಓದಿಸಿಕೊಂಡು ಹೋಗುವ ಕಾದಂಬರಿ.